ಬಳಕೆದಾರರು:  ಶ್ರೀ ಸೀತಾರಾಮ್ ಭಟ್, ಇಡುವಾನಿ, ತಾಲ್ಲೂಕು – ಸಾಗರ್, ಜಿಲ್ಲೆ – ಶಿವಮೊಗ್ಗ. ದೂರಧ್ವನಿ – 9449884458
ಬೆಳೆ: ಶುಂಠಿ
ಪ್ರಮಾಣ: ಸಾವಯವ ಒಣ ಗೊಬ್ಬರ – ೧೬೦ ಕೆಜಿ ಮತ್ತು ದ್ರವ ಗೊಬ್ಬರ – ೧ ಲೀಟರ್ (೫೦ ಲೀಟರ್ ನೀರಿನಲ್ಲಿ ಮಿಶ್ರಣಮಾಡಬೇಕು)
ಕ್ಷೇತ್ರ: ಸರಿಸುಮಾರು 2000 ಚದರ ಅಡಿ ಕ್ಷೇತ್ರದಲ್ಲಿ, 5 ಕೆಜಿ ಶುಂಠಿಯನ್ನು ಹಾಕಲಾಗಿದೆ.
 

ಉಪಯೋಗಿಸುವ ಪದ್ಧತಿ ಈ ಕೆಳಗಿನಂತಿತ್ತು:

 
  1. ಮಳೆಗಾಲಕ್ಕೆ ಮೊದಲು ಶುಂಠಿಯನ್ನು ಬಿತ್ತಲಾಯಿತು
  2. ಶುಂಠಿಯನ್ನು ಬಿತ್ತನೆ ಮಾಡುವಾಗ – ಸಣ್ಣ ಸಣ್ಣ ಗುಂಡಿಗಳನ್ನು ಮಾಡಿ ಅದರಲ್ಲಿ ಶುಂಠಿ ಬೀಜವನ್ನು ಬಿತ್ತಲಾಗುತ್ತದೆ.
  3. ಅದರ ಮೇಲೆ ೨ – ೩ ಮುಷ್ಟಿ ಒಣ ಗೊಬ್ಬರವನ್ನು ಹಾಕಿ ಅದರ ಮೇಲೆ ಮಣ್ಣನ್ನು ಹಾಕಲಾಯಿತು (ಒಟ್ಟು 80 ಕೆ.ಜಿ).
  4. ಬಿತ್ತನೆಯ ಮೂರು ತಿಂಗಳ ನಂತರ (ಮಳೆಗಾಲದ ಅಂತ್ಯ) – ಒಣ ಗೊಬ್ಬರವನ್ನು ತಾಜಾ ಮಣ್ಣಿನಲ್ಲಿ ಬೆರೆಸಿ ಬಿತ್ತಿದ ಶುಂಠಿಯ ಮೇಲೆ ಹರಡಲಾಯಿತು
  5. ಬಿತ್ತನೆಯ ಮೂರು ತಿಂಗಳ ನಂತರ – 500 ಮಿಲಿ ದ್ರವ ಗೊಬ್ಬರವನ್ನು (25 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ್ದು) ಸಿಂಪಡಿಸಲಾಯಿತು
  6. ಬಿತ್ತನೆಯ ನಾಲ್ಕು ತಿಂಗಳ ನಂತರ – ಪುನಃ 500 ಮಿಲಿ ದ್ರವ ಗೊಬ್ಬರವನ್ನು (25 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ) ಮತ್ತೆ ಸಿಂಪಡಿಸಲಾಯಿತು.  ಮತ್ತೆ ನೀರು ಕೊಡುವ ಅಗತ್ಯವಿಲ್ಲ
  7. ಸಾಮಾನ್ಯವಾಗಿ, 5 ಕೆಜಿ ಶುಂಠಿಗೆ ನಿರೀಕ್ಷಿತ ಉತ್ಪಾದನೆಯು ಸುಮಾರು ೬೦ ರಿಂದ ೭೦ ಕೆ.ಜಿ.
  8. ಒಣ ಗೊಬ್ಬರ (ಸ್ವರ್ಗಸಾರ) ಮತ್ತು ದ್ರವ ಗೊಬ್ಬರವನ್ನು (ದಶಸಾರ) ಹಾಕಿದ ನಂತರ ಇಳುವರಿ ೧೦೦ ಕೆ.ಜಿ. 

ginger crop 

Add Comment

Where to Buy

Our Products are currently available at select retailers in Karnataka & Kerala.
Store Locator